One Kannada News

ಎನ್‌ಸಿಆರ್‌ಗೆ ಅರ್ಜಿ ಸಲ್ಲಿಸದ ವ್ಯಕ್ತಿ ಪೌರತ್ವ ಪಡೆದರೆ ಮೊದಲು ನಾನೇ ರಾಜೀನಾಮೆ ನೀಡುವೆ: ಸಿಎಂ ಹಿಮವಂತ್ ಬಿಸ್ವಾ ಶರ್ಮಾ

ಅಸ್ಸಾಂ: ತಮ್ಮ ಪಕ್ಷದ ಕೇಂದ್ರ ಸರ್ಕಾರ ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳಿಗೆ ಅಸ್ಸಾಂ ಸಿಎಂ ಹಿಮವಂತ ಬಿಸ್ವಾ ಶರ್ಮಾ ಆಕ್ಷೇಪ ವ್ಯಕ್ತಪಡಿಸಿ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.

ಎನ್‌ಸಿಆರ್‌ಗೆ ಅರ್ಜಿ ಸಲ್ಲಿಸದ ವ್ಯಕ್ತಿ ಪೌರತ್ವ ಪಡೆದರೆ ತಾವೇ ಮೊದಲು ರಾಜೀನಾಮೆ ನೀಡುವುದಾಗಿ ಶರ್ಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಿಎಎ ಜಾರಿಗೆ ನಿನ್ನೆ ಕೇಂದ್ರ ಸರ್ಕಾರವು ನಿಯಮಗಳನ್ನು ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ ಅಸ್ಸಾಂನಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಹಿಮಂತ್, ಎಸ್‌ಸಿಆರ್‌ಗೆ ನೋಂದಾವಣಿ ಮಾಡದೇ ಒಬ್ಬರು ಭಾರತದ ಪೌರತ್ವ ಪಡೆದರೂ ನಾನು ಮೊದಲು ರಾಜೀನಾಮೆ ನೀಡಿ ಪ್ರತಿಭಟಿಸುತ್ತೇನೆ ಎಂದು ತಮ್ಮದೇ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

images 2024 03 12T131259.060


ನ್ಯಾಯಾಲಯದ ಆದೇಶವನ್ನು ಕಡೆಗಣಿಸಿ ಪ್ರತಿಭಟನೆ ಮಾಡದಂತೆ ಅಸ್ಸಾಂ ಸಿಎಂ ಮೊದಲೇ ಎಚ್ಚರಿಕೆ ನೀಡಿದ್ದು, ಬೀದಿಯಲ್ಲಿ ಪ್ರತಿಭಟನೆ ಮಾಡದೇ ಸೂಕ್ತ ಮಾಧ್ಯಮದ ಮೂಲಕ ವಿರೋಧ ವ್ಯಕ್ತಪಡಿಸುವಂತೆ ಪ್ರತಿಭಟನಾಕಾರರಿಗೆ ತಿಳಿಸಿದ್ದರು.

ಪೌರತ್ವ ಕಾಯ್ದೆ 2019 ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ಥಾನದ ಮೂಲಕ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ದೇಶದ ಪೌರತ್ವ ನೀಡುವ ಉದ್ದೇಶ ಹೊಂದಿದೆ. ಸಿಎಎ ಮೊದಲೇ ಇತ್ತು. ಈಗ ಪೋರ್ಟ್‌ಲ್‌ನಲ್ಲಿ ಅರ್ಜಿ ಸಲ್ಲಿಸುವ ಸಮಯ ಬಂದಿದೆ ಅಷ್ಟೆ ಎಂದು ವಿವರಿಸಿದ್ದಾರೆ.

Tags

Share this post:

Related Posts

Leave a Comment

Your email address will not be published. Required fields are marked *

Scroll to Top